Breaking News

ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.
ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?
ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?
ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..
ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…
ದಿನ ಭವಿಷ್ಯ ಮಂಗಳವಾರ ಇಂದಿನ ನಿಮ್ಮ ರಾಶಿ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ…
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ…ತಿಳಿಯಲು ಈ ಲೇಖನ ಓದಿ…
22 ವರ್ಷ ವಯಸ್ಸಿನ ಯೆಲ್ಲಮ್ಮ ಐಎಎಸ್ ಆಗುವ ಕನಸನ್ನು ಹೊತ್ತು ತನ್ನ ಮಗುವೊಂದಿಗೆ ಆಟೋ ಚಾಲನೆ ಮಾಡಿ ಐಎಎಸ್ ಆಗುವುದಕ್ಕೆ ನಿರ್ಧರಿಸಿರುವುದು ಯಾಕೆ ಗೊತ್ತಾ.?
ಬೆಳ್ಳುಳ್ಳಿ ಎಷ್ಟು ಉಪಕಾರಿಯೋ ಗೊತ್ತು, ಅಷ್ಟೇ ಅಪಾಯಕಾರಿಯೂ ಕೂಡ..!ತಿಳಿಯಲು ಈ ಲೇಖನ ಓದಿ..
ಆಧ್ಯಾತ್ಮ

ನವರಾತ್ರಿಯ ಮಹತ್ವವೇನು?ನವರಾತ್ರಿ ವ್ರತವನ್ನು ಆಚರಿಸುವುದು ಹೇಗೆ..?ತಿಳಿಯಲು ಈ ಲೇಖನ ಓದಿ…

546

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.

ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

 

ನವರಾತ್ರಿಯ ಹಿಂದೆ ಇದೆ ಪುರಾಣ ಕಥೆ:-

ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ಕೊಂದನು.

ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ನವರಾತ್ರಿಯ ಆಚರಣೆಯ ಮಹತ್ವ :-

ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

ನವರಾತ್ರಿ ವ್ರತವನ್ನು ಆಚರಿಸುವುದು ಹೇಗೆ..?

ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯಕ್ಕೆ ಈ ವ್ರತವು ಪ್ರಾರಂಭವಾಗುತ್ತದೆ.

  • ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನದ ಮೇಲೆ ಕುಳಿತಿರುವ ಅಷ್ಟಭುಜದೇವಿಯನ್ನು ಹಾಗೂ ನವಾರ್ಣವಯಂತ್ರ ವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಘಟಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿಪೂರ್ವಕ ಪೂಜೆಯನ್ನು ಮಾಡುತ್ತಾರೆ.
  • ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳುಗಳ ಗಾತ್ರದಷ್ಟು ಚೌಕಾಕಾರ ಮಾಡಿ ಅದರಲ್ಲಿ (ಐದು ಅಥವಾ) ಏಳು ಧಾನ್ಯಗಳನ್ನು ಹಾಕಬೇಕು. ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು (ತೃಣ ಧಾನ್ಯ) ಮತ್ತು ಕಡಲೆ ಇವು ಸಪ್ತಧಾನ್ಯಗಳಾಗಿವೆ.
  • ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.
  •  ಸಪ್ತಧಾನ್ಯ ಮತ್ತು ಕಲಶ ಸ್ಥ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರು ಹೇಳಿ ‘ಸಮರ್ಪಯಾಮಿ’ ಎಂದು ನಾಮಮಂತ್ರದ ಉಪಯೋಗವನ್ನು ಮಾಡಬೇಕು. ಕಲಶದೊಳಗೆ ತಲುಪುವಂತೆ ಮಾಲೆಯನ್ನು ಕಟ್ಟಬೇಕು.
  • ಒಂಭತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿ ಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
  • ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.
  • ಭಕ್ತನಿಗೆ ಉಪವಾಸವಿದ್ದರೂ ದೇವತೆಗೆ ಎಂದಿನಂತೆ ಅನ್ನದ ನೈವೇದ್ಯವನ್ನು ಮಾಡಬೇಕು.
  • ಈ ಕಾಲದಲ್ಲಿನ ಆಚಾರದ ಒಂದು ಉತ್ಕೃಷ್ಟ ಅಂಗವೆಂದು ಶ್ಮಶ್ರೂ ಮಾಡದಿರುವುದು (ಗಡ್ಡ-ಮೀಸೆಗಳ ಕೂದಲು ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), ಕಠೋರ ಬ್ರಹ್ಮಚರ್ಯ, ಮಂಚ ಮತ್ತು ಹಾಸಿಗೆಯ ಮೇಲೆ ಮಲಗದಿರುವುದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆಗಳನ್ನು ಉಪಯೋಗಿಸದಿರುವುದು ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತಾರೆ.
  • ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿಯ ವಿಸರ್ಜನೆಯಾಗುವುದು ಆವಶ್ಯಕವಾಗಿದೆ. ಆ ದಿನ ಸಮಾರಾಧನೆ (ಭೋಜನಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೆಕು, ಸಮಯವಿಲ್ಲದಿದ್ದರೆ ಮರುದಿನ ಎಲ್ಲ ದೇವರಿಗೂ ಪೂಜಾಭಿಷೇಕಗಳನ್ನು ಮಾಡಬೇಕು.
  • ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗೂ ‘ಶಾಕಂಭರಿದೇವಿ’ ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.
  •  ನವರಾತ್ರಿಯನ್ನು ಪ್ರಾರಂಭಿಸುವಾಗ ಅಥವಾ ಸಮಾಪ್ತಿ ಮಾಡುವಾಗ ದೇವರ ಉದ್ವಾರ್ಜನೆಯನ್ನು (ಸುಗಂಧಿತ ದ್ರವ್ಯಗಳಿಂದ ಸ್ವಚ್ಛಗೊಳಿಸುವುದು ಮತ್ತು ಲೇಪವನ್ನು ಹಚ್ಚುವುದು) ಅವಶ್ಯ ಮಾಡಬೇಕು. ಉದ್ವಾರ್ಜನೆ ಮಾಡಲು ನಿತ್ಯದಂತೆ ನಿಂಬೆಕಾಯಿ, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು. ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣವನ್ನು ಉಪಯೋಗಿಸಬಾರದು.
  • ಕೊನೆಗೆ, ಸ್ಥಾಪಿಸಿದ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು.
  • ನವರಾತ್ರಿ ಅಥವಾ ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಯಾವಾಗಲೂ ಉರಿಯುತ್ತಿರಬೇಕು. ಇದು ಪೂಜಾವಿಧಿಯ ಅಂಗವಾಗಿದೆ. ಆದುದರಿಂದ ದೀಪವು ಗಾಳಿ, ಎಣ್ಣೆ ಕಡಿಮೆಯಾಗುವುದು, ಉರಿದು ಕಪ್ಪಾಗುವುದು ಮುಂತಾದ ಕಾರಣಗಳಿಂದಾಗಿ ನಂದಿದರೆ ಆ ಕಾರಣವನ್ನು ದೂರಗೊಳಿಸಿ ದೀಪವನ್ನು ಪುನಃ ಉರಿಸಬೇಕು ಮತ್ತು ಪ್ರಾಯಶ್ಚಿತ್ತವೆಂದು ಅಧಿಷ್ಠಾನದೇವತೆಯ 108 ಅಥವಾ 1008 ರಷ್ಟು ಜಪ ಮಾಡಬೇಕು.
  • ದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು – ‘ಹೇ ದೇವಿ, ನಾವು ಶಕ್ತಿಹೀನರಾಗಿದ್ದೇವೆ, ಅಪರಿಮಿತ ಭೋಗವನ್ನು ಭೋಗಿಸಿ ಮಾಯಾಸಕ್ತರಾಗಿದ್ದೇವೆ. ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಾವು ಅಸುರೀ ಪ್ರವೃತ್ತಿಯನ್ನು ನಾಶ ಮಾಡುವಂತಾಗಲಿ.’

ಮೂಲ:

About the author / 

sulochana

Hot News

ಆರೋಗ್ಯ

all

  • ಉಪಯುಕ್ತ ಮಾಹಿತಿ

    ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.

    ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು? ನಿಜ ಈ ದೇಶದಲ್ಲಿ ಟಿವಿ ನಿಷೇದ ಮಾಡಲಾಗಿತ್ತು ಮತ್ತು ಈ ದೇಶ ಟಿವಿ ಒಂದಿದ ಕಟ್ಟಕಡೆಯ ದೇಶ ಎಂಬ ಕುಖ್ಯಾತಿ ಹೊಂದಿದೆ.

  • ಸಿನಿಮಾ

    ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅನೇಕ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ಯಜಮಾನ, ಕುರುಕ್ಷೇತ್ರ ಚಿತ್ರಗಳು ಇನ್ನೇನು ತೆರೆ ಕಾಣಲಿವೆ ಮತ್ತು ಒಡೆಯ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಈ ಬೆನ್ನಲ್ಲೇ ದರ್ಶನ್ ರವರ ಮುಂದಿನ ಚಿತ್ರದಲ್ಲಿ ನಟಿ ರಮ್ಯ ನಟಿಸುವುದು ಬಹುತೇಕ ಖಚಿತ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ದರ್ಶನ್ ತಮಗೆ ಸಂಭವಿಸಿದ ಅಪಘಾತದಿಂದ ಕೈಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆ ಯುತ್ತಿದ್ದು ಯಾವ ಚಿತ್ರದಲ್ಲಿ ರಮ್ಯ ಜೊತೆ ನಟಿಸಲಿದ್ದಾರೆ ಎಂಬ ಕುತೂಹಲ…

  • ರಾಜಕೀಯ

    ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?

    0

    ಎಲ್ಲಾ ರಾಜಕೀಯ ಪಕ್ಷಗಳಿಂದ 2019ರ ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ.ಈಗ ಜೆಡಿಎಸ್ ಪಕ್ಷದ ಪಾಳಯದಲ್ಲಿ ಚರ್ಚೆಯೊಂದು ಶುರುವಾಗಿದೆ. ಅದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರಿಸಿರುವ ನಿಖಿಲ್ ಕುಮಾರಸ್ವಾಮಿ ‘ರಾಜಕೀಯ ನನ್ನ ಕಣದಲ್ಲಿ ಬಂದಿದೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ‘ಅನಿವಾರ್ಯವಾದರೆ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.ಇದರ ಜೊತೆ ಸಿನಿಮಾವನ್ನು ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಯೇ…

  • ಜ್ಯೋತಿಷ್ಯ

    ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..

    0

    ಪ್ರತಿಯೊಬ್ಬರ ಮನೆಗೆ ಅವರಿಗೆ ಬೇಕಾದ ರೀತಿಯಲ್ಲಿ ಪೀಠೋಪಕರಣಗಳನ್ನೂ ತರುತ್ತಾರೆ.ಇದು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ.ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಸೇರಿದಂತೆ ಮಂಗಳವಾರ,ಶನಿವಾರಗಳಂದು ಪೀಠೋಪಕರಣಗಳನ್ನು ಕೊಂಡು ಮನೆಗೆ ತರಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು…

  • ರಾಜಕೀಯ

    ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…

    ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಸೀಟ್ ಗಳು ಬಂದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದ್ರು. ಆದ್ರೆ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಕಷ್ಟ ಒಂದು ಎದುರಾಗಿದ್ದು, ಮೂಲಗಳ ಪ್ರಖಾರ 14 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದರ ಮೂಲಕ ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿರವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರು ಪಕ್ಷೇತ್ರರ ಶಾಸಕ ಸೇರಿ ಕಾಂಗ್ರೆಸ್ ನ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ….

hallihudugaru