Breaking News

ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.
ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?
ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?
ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..
ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…
ದಿನ ಭವಿಷ್ಯ ಮಂಗಳವಾರ ಇಂದಿನ ನಿಮ್ಮ ರಾಶಿ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ…
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ…ತಿಳಿಯಲು ಈ ಲೇಖನ ಓದಿ…
22 ವರ್ಷ ವಯಸ್ಸಿನ ಯೆಲ್ಲಮ್ಮ ಐಎಎಸ್ ಆಗುವ ಕನಸನ್ನು ಹೊತ್ತು ತನ್ನ ಮಗುವೊಂದಿಗೆ ಆಟೋ ಚಾಲನೆ ಮಾಡಿ ಐಎಎಸ್ ಆಗುವುದಕ್ಕೆ ನಿರ್ಧರಿಸಿರುವುದು ಯಾಕೆ ಗೊತ್ತಾ.?
ಬೆಳ್ಳುಳ್ಳಿ ಎಷ್ಟು ಉಪಕಾರಿಯೋ ಗೊತ್ತು, ಅಷ್ಟೇ ಅಪಾಯಕಾರಿಯೂ ಕೂಡ..!ತಿಳಿಯಲು ಈ ಲೇಖನ ಓದಿ..
ಉಪಯುಕ್ತ ಮಾಹಿತಿ

ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.

260

ಈ ದೇಶದಲ್ಲಿ ೧೯೯೯ ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು? ನಿಜ ಈ ದೇಶದಲ್ಲಿ ಟಿವಿ ನಿಷೇದ ಮಾಡಲಾಗಿತ್ತು ಮತ್ತು ಈ ದೇಶ ಟಿವಿ ಒಂದಿದ ಕಟ್ಟಕಡೆಯ ದೇಶ ಎಂಬ ಕುಖ್ಯಾತಿ ಹೊಂದಿದೆ.

ಈಗ ಈ ದೇಶದ ಬಗ್ಗೆ ತಿಳಿಯೋಣ

ಭೂತಾನ್ ರಾಜ್ಯ ದಕ್ಷಿಣ ಏಷ್ಯಾದ ದೇಶವಾಗಿದ್ದು ಭಾರತ ಮತ್ತು ಚೀನಿ ಜನರ ಗಣರಾಜ್ಯದ ಟಿಬೆಟ್ ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. ಥಿಂಫು ದೇಶದ ರಾಜಧಾನಿಯಾಗಿದ್ದು ಅತ್ಯಂತ ದೊಡ್ಡ ನಗರವೂ ಆಗಿದೆ. ಭೂತಾನ್ ಪ್ರಪಂಚದ ಅತಿ ಬೇರ್ಪಟ್ಟ ದೇಶಗಳಲ್ಲೊಂದು. ಸಾಂಪ್ರದಾಯಿಕ ಟಿಬೆಟನ್ ಬೌದ್ಧ ಧರ್ಮ ಹಾಗೂ ಸಂಸ್ಕೃತಿಗಳನ್ನು ಕಾಪಾಡಲು ಸರ್ಕಾರ ವಿದೇಶಿ ಪ್ರಭಾವ ಮತ್ತು ಪ್ರವಾಸಿಗಳನ್ನು ದೂರವಿಟ್ಟಿದೆ. ಅಧಿಕೃತ ಭಾಷೆ ತ್ಸೊಂಗ್‌ಖಾ. ಭೂತಾನ್ ದೇಶವನ್ನು ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಉಳಿದ ಕೊನೆ ಸ್ಥಳ ಎಂದು ಪರಿಗಣಿತವಾಗಿದೆ. ಭೂತಾನ್ ದೇಶಕ್ಕೆ ೧೯೦೭ರಿಂದ ರಾಜ ಪ್ರಭುತ್ವವಿದೆ. ಈಗಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಸಾಂವಿಧಾನಿಕ ಸರಕಾರದ ಕಡೆ ವಾಲುತ್ತಿದ್ದಾರೆ. ಭೂತಾನ್ ಏಷ್ಯಾ ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ.

ಭೂತಾನ ಪೂರ್ವ ಹಿಮಾಲಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ಸ್ವತಂತ್ರ ರಾಜ್ಯ. ಉ.ಅ. 26° 30 – 28°30 ಪೂ.ರೇ. 8°45′-92°25′ ನಡುವೆ ಹಬ್ಬಿದೆ.

ಉತ್ತರದಲ್ಲಿ ಟಿಬೆಟ್, ದಕ್ಷಿಣದಲ್ಲಿ ಭಾರತದ ಪಶ್ಚಿಮ ಬಂಗಾಲ ರಾಜ್ಯದ ಜಲಪೈಗುರಿ ಜಿಲ್ಲೆ ಹಾಗೂ ಅಸ್ಸಾಮಿನ ಗೋಲಾಪಾರಾ, ಕಾಮರೂಪ ಮತ್ತು ದರಾಂಗ್ ಜಿಲ್ಲೆಗಳು, ಪಶ್ಚಿಮದಲ್ಲಿ ಟಿಬೆಟ್, ಸಿಕ್ಕಿಮ್, ನೈಋತ್ಯದಲ್ಲಿ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆ ಮತ್ತು ಪೂರ್ವದಲ್ಲಿ ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆ ಸುತ್ತುವರಿದಿದೆ.

ವಿಸ್ತೀರ್ಣ 46,600 ಚಕಿಮೀ. ಜನಸಂಖ್ಯೆ ಸುಮಾರು 1,247,000 (1983). ರಾಜಧಾನಿ ಥಿಂಪೂ.

 

ಜನಜೀವನ: 

ಹಿಮಾಲಯದ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ದೇಶಗಳಲ್ಲಿ ನೇಪಾಳ ಮೊದಲನೆಯದು, ಭೂತಾನ ಎರಡನೆಯದು. ಆದರೆ ಇದರ ಜನಸಾಂದ್ರತೆ ಕಿಮೀಗೆ ಕೇವಲ 18. ಹೆಚ್ಚಿನ ಜನಸಂಖ್ಯೆ ಮಧ್ಯ ಭೂತಾನದ ಫಲವತ್ತಾದ ಕಣಿವೆಗಳಲ್ಲಿ ಕೇಂದ್ರೀಕೃತವಾಗಿದೆ. ಉತ್ತರ ಮತ್ತು ಮಧ್ಯ ಭೂತಾನಿನಲ್ಲಿ ವಾಸಿಸುವ ಜನ ಟಿಬೆಟಿಯನ್ ಮೂಲದವರಾಗಿದ್ದು ಅವರನ್ನು ಭೋಟೆ ಅಥವಾ ಭುಟಿಯಾ ಎಂದು ಕರೆಯುತ್ತಾರೆ. ಇವರು ವಿವಿಧ ಬಗಯ ಟಿಬೆಟಿಯನ್ ಭಾಷೆಗಳನ್ನು ಆಡುತ್ತಾರೆ. ಲಿಪಿ ಟಿಬೆಟಿಯನ್ ಭಾಷೆಯನ್ನು ಹೋಲುತ್ತದೆ. ಇವರು ಟಿಬೆಟಿಯನ್ ಸಂಸ್ಕøತಿಯ ಲಿಮಾ ಪರಂಪರೆಯ ಬೌದ್ದಮತಾನುಯಾಯಿಗಳು. ದಕ್ಷಿಣದ ಮತ್ತು ನೈರುತ್ಯ ಭೂತಾನಿನಲ್ಲಿ ನೇಪಾಳೀ ವಲಸೆಗಾರರೇ ಹೆಚ್ಚಾಗಿದ್ದಾರೆ. ಇವರು ರಾಯ್, ಲಿಂಬು, ಮತ್ತು ಗುರುಂಗ್ ಬುಡಕಟ್ಟಿಗೆ ಸೇರಿದ್ದು ನೇಪಾಳಿ ಭಾಷೆ ಆಡುತ್ತಾರೆ. ಇವರು ಹಿಂದೂ ಧರ್ಮಾವಲಂಬಿಗಳು. 1959 ರಿಂದೀಚೆಗೆ ನೇಪಾಳಿಯರ ವಲಸೆಯನ್ನು ನಿಲ್ಲಿಸಲಾಗಿದೆ. ಅವರು ಭೂತಾನದ ಪ್ರಜೆಗಳಾಗಿದ್ದರೂ ಮಧ್ಯ ಭೂತಾನದಲ್ಲಿ ನೆಲಸುವುದನ್ನು ನಿಷೇಧಿಸಲಾಗಿದೆ. ನೇಪಾಳಿಯರು ದಕ್ಷಿಣ ಭೂತಾನಿನ ಆರ್ಥಿಕ ಅಭಿವೃದ್ದಿಗೆ ಬಲುಮಟ್ಟಿಗೆ ಕಾರಣರಾಗಿದ್ದಾರೆ. ಆದರೂ ಅವರ ನೆಲಸುವಿಕೆ ರಾಜಕೀಯ ಅತೃಪ್ತಿ ಮತ್ತು ಅಸ್ಥಿರತೆಗೆ ಅನೇಕ ವೇಳೆ ಕಾರಣವಾಗಿದ್ದು ಹಲವಾರು ಸಲ ಆಂತರಿಕ ಸಮಸ್ಯೆಗಳನ್ನು ಸೃಷ್ಟಿಸಿದೆ, ಪೂರ್ವ ಭೂತಾನಿನ ಜನ ಅರುಣಾಚಲ ಪ್ರದೇಶ ನಿವಾಸಿಗಳನ್ನು ಹೋಲುತ್ತಾರೆ. ಇವರು ಬೌದ್ಧಮತವನ್ನು ಅನುಸರಿಸುತ್ತಿದ್ದರೂ ಅದರ ಧಾರ್ಮಿಕವಿಧಿಗಳಲ್ಲಿ ಹೆಚ್ಚು ನಿಷ್ಠೆ ತೋರುವುದಿಲ್ಲ. ಆದ್ದರಿಂದ ಈ ಭಾಗದಲ್ಲಿ ಬೌದ್ಧಮಠಗಳು ಹಾಗೂ ಲಾಮಗಳ ಸಂಖ್ಯೆ ಕಡಿಮೆ.

ಭೂತಾನೀಯರು ಹೊರಪ್ರಪಂಚದಿಂದ ದೂರವಿರುವುದರಿಂದ ಅನೇಕ ವಿಶಿಷ್ಟತೆಗಳನ್ನು ಹೊಂದಿದ್ದಾರೆ. ಇವರು ಕಷ್ಟಸಹಿಷ್ಣುತೆಗೆ ಹೆಸರಾಗಿದ್ದಾರೆ. ಮುಖ್ಯ ಆಹಾರ ಅಕ್ಕಿ, ಗೋದಿ, ಬಾರ್ಲಿ, ಆಲೂಗಡ್ಡೆ, ಯಾಕ್‍ನ ಮಾಂಸ, ದನ ಮತ್ತು ಹಂದಿ ಮಾಂಸ ಇತ್ಯಾದಿ. ಲಾಮಾಗಳಿಗೆ ಇಲ್ಲಿಯ ಧಾರ್ಮಿಕ ಜೀವನದಲ್ಲಿ ಪ್ರಮುಖಪಾತ್ರವಿದೆ. ಇಲ್ಲಿ ಸುಮಾರು 5000 ಜನ ಲಾಮಾಗಳಿದ್ದು ಅನೇಕ ಪ್ರಸಿದ್ಧ ಬೌದ್ಧಮಠಗಳಿವೆ. ಇಲ್ಲಿಯ ಅಧಿಕೃತ ಭಾಷೆ eóÉೂೀಂಗ್ ಖಾ.

About the author / 

admin

Hot News

ಆರೋಗ್ಯ

all

  • ಉಪಯುಕ್ತ ಮಾಹಿತಿ

    ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.

    ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು? ನಿಜ ಈ ದೇಶದಲ್ಲಿ ಟಿವಿ ನಿಷೇದ ಮಾಡಲಾಗಿತ್ತು ಮತ್ತು ಈ ದೇಶ ಟಿವಿ ಒಂದಿದ ಕಟ್ಟಕಡೆಯ ದೇಶ ಎಂಬ ಕುಖ್ಯಾತಿ ಹೊಂದಿದೆ.

  • ಸಿನಿಮಾ

    ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅನೇಕ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ಯಜಮಾನ, ಕುರುಕ್ಷೇತ್ರ ಚಿತ್ರಗಳು ಇನ್ನೇನು ತೆರೆ ಕಾಣಲಿವೆ ಮತ್ತು ಒಡೆಯ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಈ ಬೆನ್ನಲ್ಲೇ ದರ್ಶನ್ ರವರ ಮುಂದಿನ ಚಿತ್ರದಲ್ಲಿ ನಟಿ ರಮ್ಯ ನಟಿಸುವುದು ಬಹುತೇಕ ಖಚಿತ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ದರ್ಶನ್ ತಮಗೆ ಸಂಭವಿಸಿದ ಅಪಘಾತದಿಂದ ಕೈಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆ ಯುತ್ತಿದ್ದು ಯಾವ ಚಿತ್ರದಲ್ಲಿ ರಮ್ಯ ಜೊತೆ ನಟಿಸಲಿದ್ದಾರೆ ಎಂಬ ಕುತೂಹಲ…

  • ರಾಜಕೀಯ

    ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?

    0

    ಎಲ್ಲಾ ರಾಜಕೀಯ ಪಕ್ಷಗಳಿಂದ 2019ರ ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ.ಈಗ ಜೆಡಿಎಸ್ ಪಕ್ಷದ ಪಾಳಯದಲ್ಲಿ ಚರ್ಚೆಯೊಂದು ಶುರುವಾಗಿದೆ. ಅದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರಿಸಿರುವ ನಿಖಿಲ್ ಕುಮಾರಸ್ವಾಮಿ ‘ರಾಜಕೀಯ ನನ್ನ ಕಣದಲ್ಲಿ ಬಂದಿದೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ‘ಅನಿವಾರ್ಯವಾದರೆ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.ಇದರ ಜೊತೆ ಸಿನಿಮಾವನ್ನು ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಯೇ…

  • ಜ್ಯೋತಿಷ್ಯ

    ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..

    0

    ಪ್ರತಿಯೊಬ್ಬರ ಮನೆಗೆ ಅವರಿಗೆ ಬೇಕಾದ ರೀತಿಯಲ್ಲಿ ಪೀಠೋಪಕರಣಗಳನ್ನೂ ತರುತ್ತಾರೆ.ಇದು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ.ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಸೇರಿದಂತೆ ಮಂಗಳವಾರ,ಶನಿವಾರಗಳಂದು ಪೀಠೋಪಕರಣಗಳನ್ನು ಕೊಂಡು ಮನೆಗೆ ತರಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು…

  • ರಾಜಕೀಯ

    ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…

    ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಸೀಟ್ ಗಳು ಬಂದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದ್ರು. ಆದ್ರೆ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಕಷ್ಟ ಒಂದು ಎದುರಾಗಿದ್ದು, ಮೂಲಗಳ ಪ್ರಖಾರ 14 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದರ ಮೂಲಕ ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿರವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರು ಪಕ್ಷೇತ್ರರ ಶಾಸಕ ಸೇರಿ ಕಾಂಗ್ರೆಸ್ ನ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ….

hallihudugaru