Breaking News

ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.
ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?
ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?
ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..
ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…
ದಿನ ಭವಿಷ್ಯ ಮಂಗಳವಾರ ಇಂದಿನ ನಿಮ್ಮ ರಾಶಿ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ…
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ…ತಿಳಿಯಲು ಈ ಲೇಖನ ಓದಿ…
22 ವರ್ಷ ವಯಸ್ಸಿನ ಯೆಲ್ಲಮ್ಮ ಐಎಎಸ್ ಆಗುವ ಕನಸನ್ನು ಹೊತ್ತು ತನ್ನ ಮಗುವೊಂದಿಗೆ ಆಟೋ ಚಾಲನೆ ಮಾಡಿ ಐಎಎಸ್ ಆಗುವುದಕ್ಕೆ ನಿರ್ಧರಿಸಿರುವುದು ಯಾಕೆ ಗೊತ್ತಾ.?
ಬೆಳ್ಳುಳ್ಳಿ ಎಷ್ಟು ಉಪಕಾರಿಯೋ ಗೊತ್ತು, ಅಷ್ಟೇ ಅಪಾಯಕಾರಿಯೂ ಕೂಡ..!ತಿಳಿಯಲು ಈ ಲೇಖನ ಓದಿ..
ಸೌಂದರ್ಯ

ಈ ಕ್ರಮಗಳನ್ನು ಪಾಲಿಸಿ, ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ಹೆಚ್ಚಿಸಿಕೊಳ್ಳಿ..!ಹೆಚ್ಚಿನ ಮಾಹಿತಿಗೆ ಲೇಖನಿ ಓದಿ…

1028

ಈಗಂತೂ ತಮ್ಮ ಸೌಂದರ್ಯದ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ.ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ.ಮತ್ತು ಸುಂದರವಾಗಿ ಕಾಣಲು ಎಷ್ಟೋ ಹಣವನ್ನು ಖರ್ಚು ಮಾಡುತ್ತಾರೆ.

ನಮ್ಮ ಮನೆಯಲ್ಲಿಯೇ ಇರುವ ಹಲವಾರು ವಸ್ತುಗಳನ್ನೇ ಉಪಯೋಗಿಸಿ ಕೊಂಡೂ ನಮ್ಮ ಮುಖ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಇಲ್ಲಿ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿದ್ರೆ ನೀವೂ 10 ದಿನದಲ್ಲೇ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಮೊದಲನೆಯ ದಿನ :-

ಮುಖವನ್ನು ಸ್ವಚ್ಚವಾಗಿ ತಣ್ಣೀರಿನಲ್ಲಿ ತೊಳೆದು, ಒರೆಸದೇ ಹಾಗೇ ಆರಲು ಬಿಡಿ. ಆರಿದ ಕೂಡಲೇ 4 ಚಮಚ ಹಾಲಿಗೆ ಚಿಟಿಕೆ ಸಕ್ಕರೆ, ಎರಡು ತೊಟ್ಟು ನಿಂಬೆ ರಸ ಕಲಸಿ ಮುಖ ಕತ್ತುಗಳ ಮೇಲೆ ಸವರಿ ಬಿಟ್ಟು ಬಿಡಿ, ಮತ್ತೆ ಯಾವ ಅಲಂಕಾರಿಕ ಸಾಧನಗಳನ್ನೂ ಬಳಸಬೇಡಿ.ಕಣ್ಣಿನ ಸುತ್ತ  ಮತ್ತು ತುಟಿಯಡಿಯಲ್ಲಿಸ್ವಲ್ಪ ಹೆಚ್ಚಾಗಿಯೇ ಹಚ್ಚಿರಿ. ರಾತ್ರೆ ಮಲಗುವ ಮುನ್ನ ಹತ್ತಿಯನ್ನು ಒದ್ದೆ ಮಾಡಿ ಮುಖವನ್ನೂ ಕತ್ತನ್ನೂ ಒರೆಸಿ 1 ಚಮಚ ಹಿಪ್ಪೆ ಎಣ್ಣೇ ಅಥವಾ ಬಾದಾಮಿ ಎಣ್ಣೆಯನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.

ಎರಡನೆಯ ದಿನ :-

ಎಂದಿನಂತೆ ಮುಖ ತೊಳೆದು ನಿಮ್ಮ ಕಾರ್ಯದಲ್ಲಿ ತೊಡಗಿ, ಸಂಜೆ ಸ್ವಚ್ಚವಾಗಿ ಮುಖ ತೊಳೆದು ಹಾಗೇ ಆರಲು ಬಿಡಿ. ನಂತರ ಗಟ್ಟೀ ಮೊಸರು 4 ಚಮಚ ತೆಗೆದು ಕೊಂಡು ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಧಾರಾಳವಾಗಿ ಮುಖ ಕತ್ತಿಗೆ ಹಚ್ಚಿ ಆರಲು ಬಿಡೀ. ಅರ್ಧ ಘಂಟೆಯ ನಂತರ ತಣ್ಣೀರಿನಲ್ಲಿ ಮುಖ ತೊಳೆದು ಹತ್ತಿ ಅಥವಾ ಸ್ವಚ್ಚವಾದ  ಟವೆಲಿನಲ್ಲಿ ಒತ್ತಿ ಒರೆಸಿ, ಯಾವ ಅಲಂಕಾರವೂ ಬೇಡ.ಮೂರನೆಯ ದಿನ :-

ಎಂದಿನಂತೆ ನಿಮ್ಮ ಕಾರ್ಯದಲ್ಲಿ ತೊಡಗಿ. ಸಂಜೆ ಮಾಮೂಲಿನಂತೆ ಸ್ವಚ್ಚವಾಗಿ ಮುಖ ತೊಳೆದು 2 ಚಮಚ ನಿಂಬೆ ರಸಕ್ಕೆ 4 ಚಮಚ ಪನ್ನೀರು  ಸೇರಿಸಿ ಮುಖ ಕತ್ತಿಗೆ ಧಾರಾಳವಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದು ಬಿಡಿ. ರಾತ್ರೆ ಮಲಗುವ ಮುನ್ನ ಹಸಿ ಸೌತೆಕಾಯಿಯನ್ನು ಬಿಲ್ಲೆಗಳಾಗಿ ಮಾಡಿ ಮುಖಕ್ಕೆ ಅದರ ರಸವನ್ನೆಲ್ಲಾ ತಿಕ್ಕಿ ಮಲಗಿ.

ನಾಲ್ಕನೆಯ ದಿನ :-

ಸಂಜೆ ಮುಖ ತೊಳೆದು ಹಾಗೇ ಆರಲು ಬಿಡಿ. ೪ ಚಮಚ ಹಾಲಿಗೆ ಅರಶಿನ ಸೇರಿಸಿ, ಮುಖ ಕತ್ತುಗಳಿಗೆ ಹಚ್ಚಿ ಅರ್ಧ ಘಂಟೆಯ ನಂತರ ತಣ್ಣೀರಿನಲ್ಲಿ ತೊಳೆದು ಬಿಡಿ.ಮಲಗುವಾಗ ಬಾದಾಮಿ ಅಥವಾ ಹಿಪ್ಪೆ ಎಣ್ಣೆಯನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.ಹೈದನೆಯ ದಿನ :-

ಸಂಜೆ ಮುಖ ಚೆನ್ನಾಗಿ ತೊಳೆದು ಒಂದು ಚೆಂಬು ನೀರಿಗೆ ೪ ಚಮಚ ಹಾಲು ಸೇರಿಸಿ ಮುಖದ ಮೇಲೆ ಸಿಂಪಡಿಸಿ ಕೊಳ್ಳೂತ್ತಾ ಅರುತ್ತಲೇ ಮತ್ತೆ ಮತ್ತೆ ಸಿಂಪಡಿಸಿ ಆ ಚೆಂಬಿನ ನೀರು ಖಾಲಿಯಾಗುವವರೆಗೆ ಮತ್ತು ಹಾಗೇ ಆರಲು ಬಿಡಿ. ನಂತರ ಅಗಲವಾದ ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ ಕುದಿಯುತ್ತಿರುವ ಬಿಸಿ  ಹಬೆಗೆ 5-10 ನಿಮಿಷ ನಿಮ್ಮ ಮುಖ ಒಡ್ಡಿ. ಅನಂತರ ಶುಭ್ರವಾದ ಹತ್ತಿಯಿಂದ ಮುಖವನ್ನು ಒರೆಸಿಕೊಳ್ಳಿ. ರಾತ್ರೆ ಮಲಗುವ ಮುನ್ನ ಕಣ್ಣು ರೆಪ್ಪೆಯ ಮೇಲೆ,ಕಣ್ಣುಗಳ ಕೆಳಗೆ ಮತ್ತು ತುಟಿಯ ಸುತ್ತ ಹಿಪ್ಪೆ ಎಣ್ಣೆ ಅಥವಾ ಹರಳೆಣ್ಣೆ ಸವರಿಕೊಂಡು ಮಲಗಿ.

ಆರನೆಯ ದಿನ :-

ಸಂಜೆ ಮುಖ ತೊಳೆದು  1 ಬಟ್ಟಲು ಗಟ್ಟಿ ಮೊಸರಿಗೆ ಅರ್ಧ ಬಟ್ಟಲು ಅಕ್ಕಿ ಹಿಟ್ಟು ಅಥವಾ ಕಡಲೇ ಹಿಟ್ಟು ಸೇರಿಸಿ ಮುಖ ಕತ್ತುಗಳಿಗೆ ಹಚ್ಚಿ 45 ನಿಮಿಷ ಬಿಟ್ಟು  ತಣ್ಣೀರಿನಲ್ಲಿ  ತೊಳೆಯಿರಿ.ರಾತ್ರೆ ಮಲಗುವ ಮುನ್ನ ಸೌತೆ ಕಾಯಿಯ ತಿರುಳನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.

ಏಳನೆಯ ದಿನ :-

ಎಂದಿನಂತೆ ಸಂಜೆ ಮುಖ ತೊಳೆದು ಆಲೂಗಡ್ಡೆ ಅಥವಾ ಕ್ಯಾರೆಟ್ ( ಗಜ್ಜರಿ) ಚೆನ್ನಾಗಿ ಬೇಯಿಸಿ ಹಿಟ್ಟಿನಂತೆ ಮಾಡಿ ಅದಕ್ಕೆ ಕೊಂಚ ನಿಂಬೆ ರಸ ಸೇರಿಸಿ ಮುಖ ಕತ್ತುಗಳಿಗೆ ಧಾರಾಳವಾಗಿ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಿರಿ. ರಾತ್ರೆ ಮಲಗುವ ಮುನ್ನ ಹಸೀ ಆಲೂ ಗಡ್ಡೆ ಅಥವಾ ಕ್ಯಾರೆಟ್ಟಿನ ( ಗಜ್ಜರಿ) ರಸವನ್ನು ಮುಖಕ್ಕೆ ಹಚ್ಚಿ ಮಲಗಿ.

ಎಂಟನೆಯ ದಿನ :-

ಸಂಜೆ ಮುಖವನ್ನು ತೊಳೆದು ನೀರು ಆರಲು ಬಿಡಿ 1 ಚಮಚ ಲಿಂಬೆ ರಸಕ್ಕೆ 2 ಚಮಚ ಹಿಪ್ಪೆ ಎಣ್ಣೆ ಅಥವಾ ಹರಳೆಣ್ಣೆಯನ್ನು ಸೇರಿಸಿ ಕಲಸಿ ಕೆನ್ನೆ ಕತ್ತು ಮತ್ತು ಹಣೆಯ ಮೇಲೆ ತೋರು ಬೆರಳಿನಿಂದ  ಸವರಿ ಎಲ್ಲಾ  ಮಿಶ್ರಣ ಮುಗಿಯುವ ವರೆಗೂ ಹಾಗೇ ಮರ್ಧಿಸುತ್ತಾ  ಇರಿ. 1 ಗಂಟೆಯ ಕಾಲ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಒದ್ದೆಯಾದ ಹತ್ತಿಯಿಂದ ಮುಖ ಕತ್ತುಗಳನ್ನು ಒತ್ತಿ ನೀರು ಒಣಗಿಸಿಕೊಳ್ಳಿ. ರಾತ್ರೆ ಒಂದಿಷ್ಟು ಲಿಂಬೆ ರಸವನ್ನು ಮುಖ ಕತ್ತುಗಳಿಗೆ ಹಚ್ಚಿ ಮಲಗಿ.

ಒಂಬತ್ತನೆಯ ದಿನ :-

ಚೆನ್ನಾಗಿ ಮುಖ ತೊಳೆದು ಆರಿಸಿ, 2 ಚಮಚ ಪನ್ನೀರಿಗೆ 1  ಸಣ್ಣ ಗಡ್ಡೆ ಐಸ್ ಗಡ್ಡೆ ಹಾಕಿ ಮುಖ ಕತ್ತುಗಳಿಗೆ ಸವರಿ ಹಾಗೆಯೇ ಬಿಡಿ. ಮಲಗುವ ಮುನ್ನ ೪ ಚಮಚ ಲಿಂಬೆ ರಸಕ್ಕೆ ೪ ತೊಟ್ಟು ಬಾದಾಮಿ ಎಣ್ಣೆ ಹಾಕಿ ಕಲಸಿ ಮುಖ ಕತ್ತುಗಳಿಗೆ ಹಚ್ಚಿ ಮಲಗಿ.

ಹತ್ತನೆಯ ದಿನ :-

ಮುಖ ತೊಳೆದು  ಗಟ್ಟಿ ಮೊಸರಿಗೆ ಕಡಲೆ ಹಿಟ್ಟನ್ನು ಸೇರಿಸಿ ಮುಖ ಕತ್ತುಗಳ ಮೇಲೆ ನಯವಾಗಿ ಉಜ್ಜಿ ೫ ನಿಮಿಷ ಬಿಟ್ಟು ಮುಖ  ತೊಳೆದು ಒರೆಸಿ ಕೊಳ್ಳಿ. ಮಲಗುವ ಮುನ್ನ 2 ಚಮಚ ನಿಂಬೆ ರಸಕ್ಕೆ 1 ಚಮಚ ಗ್ಲಿಸರೀನ್ ಸೇರಿಸಿ ಮುಖ  ಕತ್ತುಗಳಿಗೆಲ್ಲಾ ಹಚ್ಚಿ ಮಲಗಿ.

ಮರುದಿನ ನಿಮ್ಮ ಮುಖದ ಕಾಂತಿ ಹೆಚ್ಚಾಗಿರುವುದನ್ನು ಗಮನಿಸಿ. ಮೂರು ತಿಂಗಳಿಗೊಮ್ಮೆ ಈ ಪದ್ಧತಿಯನ್ನು ಅನುಸರಿಸಿ ನಿಮ್ಮ ಮುಖ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಮೂಲ

 

About the author / 

sulochana

Hot News

ಆರೋಗ್ಯ

all

 • ಉಪಯುಕ್ತ ಮಾಹಿತಿ

  ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.

  ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು? ನಿಜ ಈ ದೇಶದಲ್ಲಿ ಟಿವಿ ನಿಷೇದ ಮಾಡಲಾಗಿತ್ತು ಮತ್ತು ಈ ದೇಶ ಟಿವಿ ಒಂದಿದ ಕಟ್ಟಕಡೆಯ ದೇಶ ಎಂಬ ಕುಖ್ಯಾತಿ ಹೊಂದಿದೆ.

 • ಸಿನಿಮಾ

  ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅನೇಕ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ಯಜಮಾನ, ಕುರುಕ್ಷೇತ್ರ ಚಿತ್ರಗಳು ಇನ್ನೇನು ತೆರೆ ಕಾಣಲಿವೆ ಮತ್ತು ಒಡೆಯ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಈ ಬೆನ್ನಲ್ಲೇ ದರ್ಶನ್ ರವರ ಮುಂದಿನ ಚಿತ್ರದಲ್ಲಿ ನಟಿ ರಮ್ಯ ನಟಿಸುವುದು ಬಹುತೇಕ ಖಚಿತ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ದರ್ಶನ್ ತಮಗೆ ಸಂಭವಿಸಿದ ಅಪಘಾತದಿಂದ ಕೈಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆ ಯುತ್ತಿದ್ದು ಯಾವ ಚಿತ್ರದಲ್ಲಿ ರಮ್ಯ ಜೊತೆ ನಟಿಸಲಿದ್ದಾರೆ ಎಂಬ ಕುತೂಹಲ…

 • ರಾಜಕೀಯ

  ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?

  0

  ಎಲ್ಲಾ ರಾಜಕೀಯ ಪಕ್ಷಗಳಿಂದ 2019ರ ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ.ಈಗ ಜೆಡಿಎಸ್ ಪಕ್ಷದ ಪಾಳಯದಲ್ಲಿ ಚರ್ಚೆಯೊಂದು ಶುರುವಾಗಿದೆ. ಅದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರಿಸಿರುವ ನಿಖಿಲ್ ಕುಮಾರಸ್ವಾಮಿ ‘ರಾಜಕೀಯ ನನ್ನ ಕಣದಲ್ಲಿ ಬಂದಿದೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ‘ಅನಿವಾರ್ಯವಾದರೆ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.ಇದರ ಜೊತೆ ಸಿನಿಮಾವನ್ನು ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಯೇ…

 • ಜ್ಯೋತಿಷ್ಯ

  ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..

  0

  ಪ್ರತಿಯೊಬ್ಬರ ಮನೆಗೆ ಅವರಿಗೆ ಬೇಕಾದ ರೀತಿಯಲ್ಲಿ ಪೀಠೋಪಕರಣಗಳನ್ನೂ ತರುತ್ತಾರೆ.ಇದು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ.ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಸೇರಿದಂತೆ ಮಂಗಳವಾರ,ಶನಿವಾರಗಳಂದು ಪೀಠೋಪಕರಣಗಳನ್ನು ಕೊಂಡು ಮನೆಗೆ ತರಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು…

 • ರಾಜಕೀಯ

  ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…

  ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಸೀಟ್ ಗಳು ಬಂದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದ್ರು. ಆದ್ರೆ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಕಷ್ಟ ಒಂದು ಎದುರಾಗಿದ್ದು, ಮೂಲಗಳ ಪ್ರಖಾರ 14 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದರ ಮೂಲಕ ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿರವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರು ಪಕ್ಷೇತ್ರರ ಶಾಸಕ ಸೇರಿ ಕಾಂಗ್ರೆಸ್ ನ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ….

hallihudugaru